ಬೇಯ್ಲಿ, ಫಿಲಿಪ್ ಜೇಮ್ಸ್	
1816-1902 ಇಂಗ್ಲಿಷ್ ಕವಿ, ನಾಟಿಕಗ್ ಹ್ಯಾಮ್‍ನಲ್ಲಿ ಜನನ. ಗ್ಲಾಸ್ಗೊ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ಲಿಂಕನ್ಸ್ ಇನ್ ಸೇರಿ 1840ರಲ್ಲಿ ವಕೀಲನಾದ. ಆದರೆ ವೃತ್ತಿಪರನಾಗಲಿಲ್ಲ. ಗಯಟೆಯಫೌಸ್ಟ್ ನಾಟಕ ಓದಿ ಸ್ಫೂರ್ತಿ ಪಡೆದು ಅದನ್ನೇ ತನ್ನ ರೀತಿಯಲ್ಲಿ ನಿರೂಪಿಸಿ ಫೆಸ್ಟಸ್ ಎಂಬ ಕಾವ್ಯವನ್ನು ಬರೆದ (1839). ಇದಕ್ಕೆ ಅದ್ಭುತ ಸ್ವಾಗತ ದೊರೆತು ಅನೇಕ ಆವೃತ್ತಿ ಕಂಡಿತು. 1889ರಲ್ಲಿ ಪ್ರಕಟವಾದ ಇದರ ಚಿನ್ನದ ಹಬ್ಬದ ಆವೃತ್ತಿ ಹಿಂದೆ ಬೇರೆ ಬೇರೆಯಾಗಿ ಪ್ರಕಟವಾಗಿದ್ದ ಈತನ ಇತರ ಮೂರು ಕವನ ಸಂಕಲನಗಳೂ ಸೇರಿದ ಸಂಪುಟವಾಯಿತು. ದಿ ಏಂಜಲ್ ವಲ್ರ್ಡ್ (1850), ಚಿ ಮಿಸ್ಟಿಕ್ (1855), ದಿ ಯೂನಿವರ್ಸಿಲ್ ಹಿಮ್ (1867), ಆದರೆ ಇವುಗಳಲ್ಲಿ ಯಾವ ಹೊಸತನವೂ ಇಲ್ಲದೆ ಕೇವಲ ಶಬ್ದಾಡಂಬರ, ಒಂದು ಬಗೆಯ ಅಸಂಬದ್ಧತೆ ಕಾಣುತ್ತವೆ. ಸ್ಟ್ಯಾಸ್ಮಾಡಿಕ್ ಸ್ಕೂಲ್ ಆಫ್ ಪೊಯೆಟ್ರಿಯ ಸ್ಥಾಪಕನೆಂಬ ಅಭಿದಾನ ಈ ಕವಿಗಿದೆ. 				
(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ